ಟಾಕ್ಸಿಕ್ (Toxic) ಸಿನಿಮಾ ರಿಲೀಸ್‌ಗೂ ಮೊದಲೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಇದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು, ಸಿನಿಮಾದ ಟೀಸರ್ ಯೂಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆಗಳ ಗಡಿ ತಲುಪುವ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಗೀತು ಮೋಹನ್‌ದಾಸ್ ಅವರ ನಿರ್ದೇಶನದ ಈ ಸಿನಿಮಾ ಘೋಷಣೆಯಾದ ದಿನದಿಂದಲೇ ಭಾರೀ ಕ್ರೇಜ್ ಹುಟ್ಟುಹಾಕಿದ್ದು, ಟೀಸರ್ ಬಿಡುಗಡೆಯಾದ ಬಳಿಕ ಆ ಹೈಪ್ ಇನ್ನಷ್ಟು ಹೆಚ್ಚಾಗಿದೆ. ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ದೇಶಕಿ ತಮ್ಮ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಟಾಕ್ಸಿಕ್ ಸಿನಿಮಾ ತೆಲುಗುಯೇತರ ಸಿನಿಮಾಗಳಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ದಿಲ್ ರಾಜು ಅವರ ಪವರ್‌ಹೌಸ್ ಬ್ಯಾನರ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ಜೊತೆ AP–TG ಮಾರುಕಟ್ಟೆಯಲ್ಲಿ 120 ಕೋಟಿ ರೂಪಾಯಿಗಳ ಭರ್ಜರಿ ಡಿಸ್ಟ್ರಿಬ್ಯೂಷನ್ ಡೀಲ್ ಮಾಡಿಕೊಂಡ ಮೊದಲ ತೆಲುಗುಯೇತರ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಡೀಲ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಟಾಕ್ಸಿಕ್ ಚಿತ್ರದ ಮೇಲಿರುವ ನಿರೀಕ್ಷೆ ಮತ್ತು ನಟ ಯಶ್ ಅವರ ಮಾರ್ಕೆಟ್ ವ್ಯಾಲ್ಯೂಗೆ ಸಾಕ್ಷಿಯಾಗಿದೆ. ಇದೀಗ ಮತ್ತೊಂದು ದೊಡ್ಡ ಅಪ್ಡೇಟ್ ಸಿನಿಮಾದ ಹೈಪ್ ಇನ್ನಷ್ಟು ಹೆಚ್ಚಿಸಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ, ವಿಶ್ವದ ಅತ್ಯಂತ ಖ್ಯಾತ ವಿದೇಶಿ ವಿತರಕರಲ್ಲಿ ಒಂದಾದ ಫಾರ್ಸ್ ಫಿಲ್ಮ್ಸ್ (Phars Films) ಟಾಕ್ಸಿಕ್ ಚಿತ್ರದ ವಿದೇಶಿ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇದು ಚಿತ್ರದ ಅತಿದೊಡ್ಡ ಪ್ರಿ-ರಿಲೀಸ್ ಮೈಲಿಗಲ್ಲುಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳು ಟಾಕ್ಸಿಕ್ ಸಿನಿಮಾ ಕೇವಲ ಒಂದು ಸಿನಿಮಾ ಮಾತ್ರವಲ್ಲ, ಪ್ಯಾನ್-ಇಂಡಿಯಾ ಲೆವೆಲ್‌ನ ದೊಡ್ಡ ಪ್ರಾಜೆಕ್ಟ್ ಎನ್ನುವುದನ್ನು ಸ್ಪಷ್ಟಪಡಿಸುತ್ತಿವೆ.